- ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್: ಸ್ಟಾರ್ ಆಟಗಾರರಿಗೆ ಹರಿದ ಹಣದ ಹೊಳೆ! June 12, 2022ಚೊಚ್ಚಲ ಆವೃತ್ತಿಯ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್ ಸಲುವಾಗಿ ಇದೇ ಭಾನುವಾರ ನಡೆದ ಆಟಗಾರರ ಹರಾಜಿನಲ್ಲಿ ಒಟ್ಟು 8 ಐಕಾನ್ ಆಟಗಾರರಲ್ಲಿ ಮೂವರಿಗೆ ಗರಿಷ್ಠ ಬಿಡ್ ಲಭ್ಯವಾಗಿದೆ. ಮೊದಲ ಆವೃತ್ತಿಯ ಟೂರ್ನಿಯು ಜುಲೈ 1ರಿಂದ 10ರವರೆಗೆ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆವರಣದಲ್ಲಿ ಜರುಗಲಿದೆ. ಕನ್ನಡಿಗರಾದ ಹಾಗೂ ಯುವ ಪ್ರತಿಭೆಗಳೆಂದೇ ಗುರುತಿಸಿಕೊಂಡಿರುವ ಮಿಥುನ್ ಮಂಜುನಾಥ್, ಪ್ರಕಾಶ್ ರಾಜ್ ಮತ್ತು ಸಾಯ್ ಪ್ರತೀಕ್ […]
- ಅಲ್ಟಿಮೇಟ್ ಖೊ-ಖೊ ಲೀಗ್: ನೂತನ ಫ್ರಾಂಚೈಸಿಗಳನ್ನು ಖರೀದಿಸಿದ ಅದಾನಿ, ಜಿಎಂಆರ್! June 8, 2022ಅಲ್ಟಿಮೇಟ್ ಖೊ-ಖೊ ಲೀಗ್ಗೆ ಉತ್ತೇಜನ ನೀಡುವ ಸಲುವಾಗಿ ಕಾರ್ಪೊರೇಟ್ ಅಗ್ರ ಸಂಸ್ಥೆಗಳಾದ ಅದಾನಿ ಗ್ರೂಪ್ ಮತ್ತು ಜಿಎಂಆರ್ ಗ್ರೂಪ್ಗಳು ಕ್ರಮವಾಗಿ ಗುಜರಾತ್ ಮತ್ತು ತೆಲಂಗಾಣ ಫ್ರಾಂಚೈಸಿಗಳನ್ನು ಖರೀದಿಸಿವೆ. ಅಲ್ಟಿಮೇಟ್ ಖೊ-ಖೊ ಟೂರ್ನಿಯ ಪಂದ್ಯಗಳನ್ನು ಪ್ರಸಾರ ಮಾಡುವ ಅಧಿಕೃತ ಹಕ್ಕುಗಳನ್ನು ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ ಪಡೆದುಕೊಂಡಿದೆ.
- 'ಕಿಂಗ್ ಆಫ್ ಕ್ಲೇ' ರಾಫೆಲ್ ನಡಾಲ್ಗೆ 14ನೇ ಫ್ರೆಂಚ್ ಓಪನ್ ಕಿರೀಟ! June 5, 2022ಆಧುನಿಕ ಟೆನಿಸ್ ಯುಗದಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಟ್ರೋಫಿ ಗೆದ್ದ ಅಪ್ರತಿಮ ಆಟಗಾರರ ಪೈಕಿ ಮುಂಚೂಣಿಯಲ್ಲಿರುವ ಸ್ಪೇನ್ನ ದಿಗ್ಗಜ ರಾಫೆಲ್ ನಡಾಲ್ ಇದೀಗ ತಮ್ಮ ಒಟ್ಟು ಗ್ರ್ಯಾಂಡ್ ಸ್ಲ್ಯಾಮ್ಗಳ ಗೆಲುವಿನ ದಾಖಲೆಯನ್ನು 22ಕ್ಕೆ ವಿಸ್ತರಿಸಿಕೊಂಡಿದ್ದಾರೆ. ರೊಲ್ಯಾಂಡ್ ಗ್ಯಾರೋಸ್ನಲ್ಲಿ ನಡೆದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಭಾನುವಾರ ಅಕ್ಷರಶಃ ಅಧಿಕಾರಯುತ ಆಟವಾಡಿದ 36 ವರ್ಷದ ಅನುಭವಿ ಆಟಗಾರ ರಾಫೆಲ್ ನಡಾಲ್ […]
- ದಾಖಲೆಯೊಂದಿಗೆ ಟಿಸಿಎಸ್ ವಿಶ್ವ 10ಕೆ ಗೆದ್ದ ನಿಕೋಲಸ್ ಕಿಮೆಲಿ, ಐರಿನ್ ಚೆಪ್ಟೈ! May 16, 2022ಕೋವಿಡ್-19 ಕಾರಣ ಸತತ ಎರಡು ವರ್ಷಗಳ ಕಾಲ ನಿಂತಿದ್ದ ಹದಿನಾಲ್ಕನೇ ಆವೃತ್ತಿಯ ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್ ಓಟವು ಭಾನುವಾರ ಬೆಳಗ್ಗೆ ಉದ್ಯಾನ ನಗರಿಯಲ್ಲಿ ಯಶಸ್ವಿಯಾಗಿ ನಡೆಯಿತು. 10ಕೆ ಓಟದ ಕೇಂದ್ರ ಬಿಂದುವಾದ ಅಂತಾರಾಷ್ಟ್ರೀಯ ಎಲೈಟ್ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಕೀನ್ಯಾದ ನಿಕೋಲಸ್ ಕಿಪ್ಕೊರಿರ್ ಕಿಮೆಲಿ ಹಾಗೂ ಐರಿನ್ ಚೆಪ್ಟೈ ದಾಖಲೆಯೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರು.
- 'ಇತಿಹಾಸ ಬರೆದ ಇಂಡಿಯಾ', ಥಾಮಸ್ ಕಪ್ ಟೂರ್ನಿಯಲ್ಲಿ ಭಾರತಕ್ಕೆ ಮೊದಲ ಟ್ರೋಫಿ! May 15, 2022ಸ್ಟಾರ್ ಆಟಗಾರರ ಭರ್ಜರಿ ಪ್ರದರ್ಶನದ ಬಲದಿಂದ ಮಿಂಚಿದ ಭಾರತ ತಂಡ ಪ್ರತಿಷ್ಠಿತ ತಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊತ್ತ ಮೊದಲ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಭಾನುವಾರ ನಡೆದ ಫೈನಲ್ನಲ್ಲಿ ಅಧಿಕಾರಯುತ ಪ್ರದರ್ಶನ ತಂದ ಭಾರತ ಬಹುಬಾರಿಯ ಚಾಂಪಿಯನ್ಸ್ ಇಂಡೊನೇಷ್ಯಾ ತಂಡವನ್ನು 3-0 ಅಂತರದಲ್ಲಿ ಬಗ್ಗು ಬಡಿಯುವ ಮೂಲಕ ಟ್ರೋಫಿ ಎತ್ತಿ ಹಿಡಿಯಿತು. ಭಾರತ ತಂಡದ ಪರ ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾ […]
Unable to display feed at this time.
Unable to display feed at this time.
Unable to display feed at this time.